ಸೆಪ್ಟೆಂಬರ್ 19 ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಶ್ರೀ ಜಟಾಧಾರಿ ದೈವದ ಮಹಿಮೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

September 19, 2026
jatadhari daiva mahime bettampady sep 19

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುತ್ತು ಮನೆತನದವರಿಂದ ವರ್ಷಂಪ್ರತಿ ನಡೆಸಿಕೊಂಡು ಬರುವ ಶ್ರೀ ಜಟಾಧಾರಿ ದೈವದ ಮಹಿಮೆ ಕಾರ್ಯಕ್ರಮವು ದಿನಾಂಕ 19-09-2026 ರ ಶನಿವಾರದಂದು ವಿಜೃಂಭಣೆಯಿಂದ ನಡೆಯಲಿದೆ. ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತಾದಿಗಳಿಗೆ ಆದರದ ಸ್ವಾಗತ.

ಕಾರ್ಯಕ್ರಮಗಳ ವಿವರ (19-09-2026 ಶನಿವಾರ)

  • ರಾತ್ರಿ 8:00 ರಿಂದ: ಶ್ರೀ ದೇವರಿಗೆ ಸೋಮವಾರ ಪೂಜೆ
  • ರಾತ್ರಿ 8:30 ರಿಂದ: ಶ್ರೀ ದೈವದ ಭಂಡಾರ ತೆಗೆಯುವುದು
  • ರಾತ್ರಿ 9:00 ರಿಂದ: ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ
  • ರಾತ್ರಿ 9:30 ರಿಂದ: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ
  • ರಾತ್ರಿ 1:00 ರಿಂದ: ಶ್ರೀ ಜಟಾಧಾರಿ ದೈವದ ಮಹಿಮೆ ಮತ್ತು ಪ್ರಸಾದ ವಿತರಣೆ

ಸಮಸ್ತ ಭಗವದ್ಭಕ್ತರು ಈ ಮಹತ್ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ದೇವರ ಹಾಗೂ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಇನ್ನಷ್ಟು ಓದಿ

ashtabandha brahmakalashotsava bettampady

2027ರ ಫೆಬ್ರವರಿ 19ರಿಂದ 24ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿವರವಾಗಿ ಓದಿ

shri kshetra bettampady monthly shani pooja

ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಅಕ್ಟೋಬರ್ 10ರಂದು ಶನಿ ಪೂಜೆ

ವಿವರವಾಗಿ ಓದಿ

varamahalakshmi samiti bettampady donation

ಶ್ರೀ ಕ್ಷೇತ್ರ ಬೆಟ್ಟಂಪಾಡಿಗೆ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯಿಂದ ರೂ. 1,01,001 ದೇಣಿಗೆ

ವಿವರವಾಗಿ ಓದಿ

jaya prabhakara ballal memorial donation

ಶ್ರೀ ಕ್ಷೇತ್ರಕ್ಕೆ ದಿ. ಜಯಪ್ರಭಾಕರ ಬಲ್ಲಾಳ್ ಸ್ಮರಣಾರ್ಥ ಶ್ರೀ ಶಿವಕೃಷ್ಣ ಶಿವಗಂಗಾ ನಿಲಯ ಅವರಿಂದ ರೂ. 40,000 ದೇಣಿಗೆ

ವಿವರವಾಗಿ ಓದಿ