ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ 41ನೇ ವರ್ಷದ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆಪ್ಟೆಂಬರ್ 14 ಮತ್ತು 15ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಿತು.



ಉತ್ಸವದ ಅಂಗವಾಗಿ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಗಣಪತಿ ಹೋಮ, ಮಹಾಪೂಜೆ, ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಧಾರ್ಮಿಕ ಸಭೆಯಲ್ಲಿ ಗಣೇಶೋತ್ಸವದ ಉದ್ದೇಶ, ಧಾರ್ಮಿಕ ಆಚರಣೆಗಳು ಮತ್ತು ಯುವಜನರ ಪಾಲ್ಗೊಳ್ಳುವಿಕೆಯ ಕುರಿತು ವಿಚಾರಗಳನ್ನು ಹಂಚಿಕೊಳ್ಳಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಭರತನಾಟ್ಯ, ತುಳುನಾಟಕ ಹಾಗೂ ವಿವಿಧ ಕಲಾ ಪ್ರದರ್ಶನಗಳು ನಡೆದವು. ಸೆಪ್ಟೆಂಬರ್ 15ರಂದು ನಡೆದ ಶ್ರೀ ಗಣೇಶ ದೇವರ ಶೋಭಾಯಾತ್ರೆಯಲ್ಲಿ ಭಜನಾ ತಂಡಗಳು, ಚೆಂಡೆ ಮೇಳ, ಟ್ಯಾಬ್ಲೋ, ಗೊಂಬೆ ಕುಣಿತ ಸೇರಿದಂತೆ ಹಲವು ಆಕರ್ಷಣೆಗಳು ಗಮನ ಸೆಳೆದವು. ಬಳಿಕ ಚೆಲ್ಯಡ್ಕದ ಪುಣ್ಯನದಿಯಲ್ಲಿ ಗಣೇಶ ವಿಗ್ರಹದ ಜಲಸ್ತಂಭನ ನೆರವೇರಿತು.
