ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಅಶ್ವತ್ಥ ಕಟ್ಟೆಯಲ್ಲಿ ದಿನಾಂಕ 10-10-2026 ಶನಿವಾರದಂದು ಪೂರ್ವಾಹ್ನ 8:00 ಗಂಟೆಯಿಂದ ಶನಿ ಪೂಜೆಯು ನಡೆಯಲಿದೆ. ಈ ಪೂಜಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.
ವಿಶೇಷ ಸೂಚನೆಗಳು
- ಶನಿಪೂಜೆಯ ಸೇವಾ ದರ: ರೂ. 500
- ಪ್ರತಿ ತಿಂಗಳ ಎರಡನೇ ಶನಿವಾರ ಶ್ರೀ ಕ್ಷೇತ್ರದಲ್ಲಿ ಶನಿಪೂಜೆಯು ನಡೆಯಲಿದೆ.
- ಪೂಜೆ ಮಾಡಿಸುವ ಭಗವದ್ಭಕ್ತರು ಒಂದು ದಿನ ಮುಂಚಿತವಾಗಿ ಶ್ರೀ ಕ್ಷೇತ್ರದ ಕಚೇರಿಯನ್ನು ಸಂಪರ್ಕಿಸಬೇಕಾಗಿ ವಿನಂತಿ.
- ಸಂಪರ್ಕ ಸಂಖ್ಯೆ: 9380609390