ಶ್ರೀ ಕ್ಷೇತ್ರದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪುನರ್ ನಿರ್ಮಾಣ ಕಾರ್ಯಕ್ಕೆ ಭಗವದ್ಭಕ್ತರು ವಿವಿಧ ಪರಿಕರಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.
ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಪರಿಕರಗಳನ್ನು ಭಕ್ತರು ಸೇವೆಯಾಗಿ ಸಮರ್ಪಿಸಬಹುದಾಗಿದೆ. ಶಿಲಾಮಯ ಸೋಪಾನದ ಕಲ್ಲು (ಮೆಟ್ಟಿಲು ಸೇರಿ) ₹50,000, ದಾರಂದ ₹40,000, 3 ಸ್ಟೀಲ್ ಬೀಮ್‌ಗಳು ₹40,000 ಹಾಗೂ 7 ಅಡಿ ಫೀಟ್ ಕಂಬಕ್ಕೆ ₹40,000 ಎಂದು ಸೇವಾ ಮೊತ್ತವನ್ನು ನಿಗದಿಪಡಿಸಲಾಗಿದೆ.
ಪರಿಕರಗಳನ್ನು ಸಮರ್ಪಿಸಲು ಇಚ್ಛಿಸುವ ಭಗವದ್ಭಕ್ತರು ಇದರ ಮೌಲ್ಯವನ್ನು ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449103422